ಮಲಗುವ ಮುನ್ನ ಒಂದು ಲವಂಗ ತಿನ್ನಿ.. ಹಲವು ಪ್ರಯೋಜನಗಳು!

ನಾವು ಸಾಮಾನ್ಯವಾಗಿ ಪ್ರತಿನಿತ್ಯ ಲವಂಗವನ್ನು ಅಡುಗೆಗೆ ಬಳಸುತ್ತೇವೆ. ಇದು ರುಚಿಯನ್ನು ನೀಡುವುದು ಮಾತ್ರವಲ್ಲದೆ ನಮ್ಮ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಅಡುಗೆಯಲ್ಲಿ ಲವಂಗಗಳ ಬಳಕೆಯು ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರೊಂದಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. 

ಲವಂಗದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಸ್ ವಿರೋಧಿ ಗುಣಗಳಿವೆ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳಿಂದ ನಮ್ಮನ್ನು ಲವಂಗ ರಕ್ಷಿಸುತ್ತದೆ. ಆದ್ದರಿಂದ ಮಲಗುವ ಮುನ್ನ ಲವಂಗವನ್ನು ಬಳಸಿದರೆ.. ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ. 

ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂನಂತಹ ಅನೇಕ ಖನಿಜಗಳು ಮತ್ತು ವಿಟಮಿನ್ ಗಳು ಲವಂಗದಲ್ಲಿ ಕಂಡುಬರುತ್ತವೆ. ಪ್ರತಿದಿನ ಬೆಳಿಗ್ಗೆ ಲವಂಗವನ್ನು ಬಾಯಿಯಲ್ಲಿ ಅಗಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಆದರೆ ಮಲಗುವ ಮುನ್ನ ಲವಂಗವನ್ನು ಸೇವಿಸಿ. ಈ ಅವಧಿಯಲ್ಲಿ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲವಂಗವನ್ನು ಬಾಯಿಗೆ ಹಾಕಿಕೊಳ್ಳುವುದು ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ನಿದ್ರೆ ಮಾಡಲು ಸಹಾಯಕವಾಗಿದೆ.

  • ಹಲ್ಲು ನೋವು ಬರುವುದಿಲ್ಲ

ಲವಂಗ ತಿನ್ನುವುದರಿಂದ ಹಲ್ಲು ನೋವು ಬರುವುದಿಲ್ಲ. ಹಲ್ಲುಗಳಲ್ಲಿ ಹುಳ ಬೀಡುವುದು ಸಹ ಕಡಿಮೆಯಾಗುತ್ತದೆ. ಲವಂಗ ತಿನ್ನುವುದರಿಂದ ಚಯಾಪಚಯವನ್ನು ಹೆಚ್ಚುತ್ತದೆ. ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಲವಂಗವನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ಕೂಡ ನಿಯಂತ್ರಿಸಬಹುದಾಗಿದೆ. ಮಲಬದ್ಧತೆ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

  • ಮಲಬದ್ಧತೆಯ ಸಮಸ್ಯೆಗೆ ರಾಮಬಾಣ

ಹಲವರು ಮಲಬದ್ಧತೆಯಿಂದ ಬಳಲುತ್ತಿರುತ್ತಾರೆ. ಅಂತಹವರು ಮಲಗುವ ಮುನ್ನ ಎರಡು ಲವಂಗವನ್ನು ಜಗಿದು ಬೆಚ್ಚಗಿನ ನೀರನ್ನು ಕುಡಿಯಬೇಕು. ಇದನ್ನು ನಿಯಮಿತವಾಗಿ ಮಾಡಿದರೆ ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ. ರಾತ್ರಿ ಮಲಗುವ ಮುನ್ನ ಒಂದು ಅಥವಾ ಎರಡು ಲವಂಗಗಳನ್ನು ತಿನ್ನುವುದರಿಂದ ಅವುಗಳಲ್ಲಿರುವ ಕೆಲವು ವಿಶೇಷ ಪೋಷಕಾಂಶಗಳಿಂದಾಗಿ ಮೊಡವೆ ಉಂಟಾಗುವುದನ್ನು ತಡೆಯಬಹುದು. ಲವಂಗವು ನೋಯುತ್ತಿರುವ ಗಂಟಲುಗಳನ್ನು ನಿವಾರಿಸುವಲ್ಲಿ ಸಹ ಕೆಲಸ ಮಾಡುತ್ತದೆ ಎನ್ನಲಾಗುತ್ತದೆ.

  • ರೋಗ ನಿರೋಧಕ ಶಕ್ತಿ ಹೆಚ್ಚಸುತ್ತದೆ:

ಲವಂಗವನ್ನು ಪ್ರತಿದಿನ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇತರ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಮಲಗುವ ಮುನ್ನ ಒಂದು ಲವಂಗ ಅಥವಾ ಎರಡನ್ನು ತಿನ್ನಿರಿ. ನಂತರ ಸಾಧ್ಯವಾದರೆ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ. ಕೆಮ್ಮು, ಶೀತ, ವೈರಲ್ ಸೋಂಕು, ಬ್ರಾಂಕೈಟಿಸ್, ಸೈನಸ್ ಮತ್ತು ಅಸ್ತಮಾವನ್ನು ಹೋಗಲಾಡಿಸಲು ಲವಂಗವು ತುಂಬಾ ಸಹಾಯಕವಾಗಿದೆ.

ಬೇಗನೆ ಮಲಗಿದಾಗ ನಮ್ಮ ದೇಹದಲ್ಲಿನ ಹಾರ್ಮೋನುಗಳನ್ನು ನಿಯಂತ್ರಿಸಲು ಲವಂಗ ಸಹಾಯ  ಮಾಡುತ್ತದೆ, ವಿಶೇಷವಾಗಿ ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ರಾತ್ರಿಯ ಆರಂಭಿಕ ಗಂಟೆಗಳಲ್ಲಿ ಸ್ವಾಭಾವಿಕವಾಗಿ ನಿದ್ದೆ ಬರುವುದಿಲ್ಲ ಈ ಸಮಯದಲ್ಲಿ ಬೇಗ ನಿದ್ದೆ ಬರುವಂತೆ ಮಾಡುತ್ತದೆ. ಬೇಗನೆ ಮಲಗುವುದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಪ್ರತಿನಿತ್ಯ ರಾತ್ರಿ ವೇಳೆ ಒಂದು ಲವಂಗ ಸೇವಿಸುವುದು ಒಟ್ಟಾರೆ ನಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ನಾವು ಬೇಗನೆ ಮಲಗಲು ಹೋದಾಗ, ನಮ್ಮ ದೇಹವು ವಿಶ್ರಾಂತಿ ಪಡೆಯಲು ಮತ್ತು ಪುನಃ ಶಕ್ತಿಯನ್ನು ತುಂಬಲು ಸಾಕಷ್ಟು ಸಮಯವನ್ನು ಪಡೆಯುತ್ತದೆ. ಇದು ಸುಧಾರಿತ ಮನಸ್ಥಿತಿ ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಾಕಷ್ಟು ನಿದ್ರೆ ಪಡೆಯುವುದು ಮಧುಮೇಹ, ಹೃದ್ರೋಗ ಮತ್ತು ಬೊಜ್ಜು ಮುಂತಾದ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆ. ಲವಂಗ ನಿದ್ದೆ ಮಾಡಲು ಒಳ್ಳೆಯ ದೇಹದ ಸ್ಥಿತಿಯನ್ನು ಸೃಷ್ಟಿಸುತ್ತದೆ.

 ದೇಹದಲ್ಲಿನ ಹಾರ್ಮೋನುಗಳನ್ನು ನಿಯಂತ್ರಿಸಲು ಸಹಾಯ ಲವಂಗ ಮಾಡುತ್ತದೆ, ವಿಶೇಷವಾಗಿ ಒತ್ತಡಕ್ಕೆ ಸಂಬಧಿಸಿದ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ರಾತ್ರಿಯ ಆರಂಭಿಕ ಗಂಟೆಗಳಲ್ಲಿ ಸ್ವಾಭಾವಿಕವಾಗಿ ನಿದ್ದೆ ಬರುವುದಿಲ್ಲ ಈ ಸಮಯದಲ್ಲಿ ಬೇಗ ನಿದ್ದೆ ಬರುವಂತೆ ಮಾಡುತ್ತದೆ. ಬೇಗನೆ ಮಲಗುವುದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಪ್ರತಿನಿತ್ಯ ರಾತ್ರಿ ವೇಳೆ ಒಂದು ಲವಂಗ ಸೇವಿಸುವುದು ಒಟ್ಟಾರೆ ನಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

Read also

Suddi Sarathi

Hi. i am Anil kumar S., completed masters in Mass communication and journalism in Tumkur University. currently working in Anynews short News App as a content Writer. i have one year experience in print Media.

Post a Comment

Previous Post Next Post