ವ್ಯಸನದಿಂದ ಬದುಕಿಗೆ ಹಾನಿಯಾಗುತ್ತದೆ ಆಗಾಗಿ ನಾವು ಅದರಿಂದ ಅಂತರ ಕಾಪಾಡಿಕೊಳ್ಳುವುದು ಮುಖ್ಯ ಎಂದು ಅಚರ್ಡ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಮುತ್ತರಾಯಪ್ಪ ಹೇಳಿದರು.
ಶಿರಾ ತಾಲ್ಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ 'ಸರಣಿ ಸಂವಾದ' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಈ ಹದಿಹರೆಯದ ವಯಸ್ಸಿನಲ್ಲಿ ತುಮುಲಗಳು ಸಹಜ ಅದನ್ನು ಹಿಡಿತದಲ್ಲಿ ಇಟ್ಟಿಕೊಳ್ಳಬೇಕು. ದುಶ್ಚಟಗಳ ಬಗ್ಗೆ ಕೆಟ್ಟ ಕೌತುಕಗಳು ಬೇಡ. ಬೆಟ್ಟಿಂಗ್, ಮೊಬೈಲ್ ಚಟದಿಂದ ದೂರವಿರಿ.
ಕೀಳರಿಮೆ ಬಿಟ್ಟು ಸಾಧನೆಕಡೆಗೆ ನಿಮ್ಮ ನಡೆ ಇರಲಿ ಎಂದೇಳಿದರು ಹಾಗೆಯೇ ಮಕ್ಕಳ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ಶಾಲಾ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಎಂ. ಮಾತಾನಾಡಿ ಈ ತರಹದ ಉಪನ್ಯಾಸಗಳು ಮಕ್ಕಳಿಗೆ ತೀರಾ ಅವಶ್ಯಕ. ನೈತಿಕ ಮೌಲ್ಯಗಳು ಬದುಕಿಗೆ ಮುಖ್ಯ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದೇಳಿದರು.
ಕಾರ್ಯಕ್ರಮದಲ್ಲಿ ಗ್ರಾ. ಪಂ ಸದಸ್ಯ ಶಿವು ಕುಮಾರನಾಯ್ಕ, ಶಿವು ಸ್ನೇಹಪ್ರಿಯ, ರವಿತೇಜ ಚಿಗಳಿಕಟ್ಟೆ ಹಾಗೂ ಶಾಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು. ರಶ್ಮಿ ಎಲ್. ನಿರೂಪಿಸಿ, ವಂದಿಸಿದರು.
ವರದಿ: ರವಿತೇಜ ಚಿಗಳಿಕಟ್ಟೆ